ಪರಿವರ್ತನ - (ಇ.ಎಮ್.ಡ್ಯಾಶ್‍ಬೋರ್ಡ್‍)

ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗು ಸಕಾಲ ಸಚಿವರಾದ ಶ್ರೀ.ಎಸ್.ಸುರೇಶ್ ಕುಮಾರ್‍ರವರು ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಮತ್ತು ಕಾರ್ಯಕ್ಷಮತೆಯ ಸಂಪೂರ್ಣ ಚಿತ್ರಣ ಮತ್ತು ಒಳನೋಟಕ್ಕಾಗಿ ಒಂದು ಡ್ಯಾಶ್‍ಬೋರ್ಡ್‍ನ ಅಗತ್ಯತೆಯ ಚಿಂತನೆ ಮಾಡಿದ್ದರು. ಅದರಂತೆ ಪ್ರಸ್ತುತ ಇಲಾಖೆಯ ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಮತ್ತು ಕಾರ್ಯಕ್ಷಮತೆಯ ಸಂಪೂರ್ಣ ಚಿತ್ರಣವನ್ನು “ಪರಿವರ್ತನ” ವೆಬ್ ಪೋರ್ಟಲ್ (ಇ.ಎಂ. ಡ್ಯಾಷ್ ಬೋರ್ಡ್) ಅಭಿವೃದ್ಧಿ ಪಡಿಸಲಾಗಿದೆ. ಈ ಮೊದಲು ಇಲಾಖೆಯ ವಿವಿಧ ನಿರ್ದೇಶನಾಲಯಗಳು ಬಳಸುತ್ತಿರುವ ವಿವಿಧ ತಂತ್ರಾಂಶಗಳ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬೇಕಿತ್ತು. ಪರಿವರ್ತನ (ಇ.ಎಮ್.ಡ್ಯಾಶ್‍ಬೋರ್ಡ್‍)ನಲ್ಲಿ ಪ್ರಸ್ತುತ ಇಲಾಖೆಯಲ್ಲಿ ಬಳಸುತ್ತಿರುವ ಬಹು ಐಟಿ ವ್ಯವಸ್ಥೆಗಳಿಂದ ಸಂಬಂಧಿಸಿದ ಮಾಹಿತಿಯನ್ನು ಸಂಯೋಜಿಸಿ ಇಲಾಖೆಯ ಉನ್ನತ ಮಟ್ಟದ ನಿರ್ವಹಣೆಯಲ್ಲಿರುವವರಿಗೆ ಅದನ್ನು ಪ್ರಸ್ತುತಪಡಿಸಿ ಇಲಾಖೆಯ ಕಾರ್ಯಕ್ಷಮತೆ ಮತ್ತು ಪ್ರಗತಿಯ ಒಂದು ನೋಟವನ್ನು ನೀಡುವುದರೊಂದಿಗೆ ಮತ್ತಷ್ಟು ಆಳಕ್ಕೆ ಇಳಿದು ಸೂಕ್ಷ ್ಮ ಮಟ್ಟದ ಮಾಹಿತಿಯನ್ನು ವೀಕ್ಷಿಸಲು ಅವಕಾಶವಿದೆ. ಪರಿವರ್ತನ(ಇ.ಎಮ್.ಡ್ಯಾಶ್‍ಬೋರ್ಡ್‍)ನಲ್ಲಿ ಒದಗಿಸಲಾದ ಪ್ರಮುಖ ಮಾಹಿತಿ ಈ ಕೆಳಗಿನವುಗಳನ್ನು ಒಳಗೊಂಡಿವೆ:

 1. ಸಚಿವರ ನಿರ್ದೇಶನಗಳು : ಮಾನ್ಯ ಸಚಿವರು ಹೊರಡಿಸಿದ ನಿರ್ದೇಶನಗಳನ್ನು ಇಲ್ಲಿ ನಮೂದಿಸಬಹುದಾಗಿದ್ದು, ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ ಸಮಯ ನಿಗದಿಗೊಳಿಸಿ ಈ ನಿರ್ದೇಶನವನ್ನು ಕಳುಹಿಸಿ, ಅಧಿಕಾರಿಗಳು ತಮ್ಮ ಅನುಪಾಲನೆಯನ್ನು ನಮೂದಿಸಬಹುದಾಗಿದೆ. ಹೊರಡಿಸಿರುವ ನಿರ್ದೆಶನಗಳಿಗೆ ಮಾನ್ಯ ಸಚಿವರ ಕಚೇರಿಯಲ್ಲಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಬಹುದು.
 2. ಶಾಲೆಗಳು : ಈ ವಿಭಾಗವು ಶಾಲೆಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. ಶಾಲೆಗಳ ಸಂಖ್ಯೆ, ಶಾಲೆಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು, ಶಾಲಾ ಸೌಲಭ್ಯಗಳು ಮತ್ತು ಶಾಲಾ ಶಿಕ್ಷಕರ ಕುರಿತ ಮಾಹಿತಿಯನ್ನು ಡ್ಯಾಶ್‍ಬೋರ್ಡ್‍ನಲ್ಲಿ ಡ್ರಿಲ್-ಡೌನ್ ಮಾಡುವ ಮೂಲಕ ಶೈಕ್ಷಣಿಕ ಜಿಲ್ಲಾ ಹಂತ ಮತ್ತು ಬ್ಲಾಕ್ ಹಂತದವರೆಗಿನ ವಿವರಗಳನ್ನು ಪಡೆಯಬಹುದಾಗಿದೆ.
 3. ವಿದ್ಯಾರ್ಥಿಗಳು : ಈ ವಿಭಾಗವು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪ್ರತ್ಯೇಕವಾಗಿ ಬಾಲಕ ಮತ್ತು ಬಾಲಕಿಯರ ಮಾಹಿತಿ ಲಭ್ಯವಿದೆ. ಜಿಲ್ಲಾವಾರು ಮತ್ತು ಬ್ಲಾಕ್‍ವಾರು ಮಾಹಿತಿಯೊಂದಿಗೆ, ಶಾಲೆಗಳ ವಿಧಗಳು, ಪ್ರಾಕಾರಗಳು ಮತ್ತು ಮಾಧ್ಯಮಗಳ ಬಗ್ಗೆ ಡ್ರಿಲ್-ಡೌನ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
 4. ಶಿಕ್ಷಕರು(ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು) : ಶಿಕ್ಷಕರಿಗೆ ಸಂಬಂಧಿಸಿದ ವಿವರಗಳನ್ನು ಈ ವಿಭಾಗವು ಒದಗಿಸುತ್ತದೆ. ಶಿಕ್ಷಕರ ಸಂಖ್ಯೆ, ವಿಷಯವಾರು ಶಿಕ್ಷಕರ ಸಂಖ್ಯೆ, ಶೈಕ್ಷಣಿಕ ಅರ್ಹತೆ, ಶಿಕ್ಷಕರ ಅನುಭವ, ಶಿಕ್ಷಕರ ತರಬೇತಿ ಮತ್ತು ಶಿಕ್ಷಕ ಮಿತ್ರ ಕುರಿತು ಮಾಹಿತಿಯನ್ನು ಡ್ರಿಲ್-ಡೌನ್ ಮಾಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದವರೆಗಿನ ವಿವರವನ್ನು ಪಡೆದುಕೊಳ್ಳಲು ಅವಕಾಶವಿದೆ.
 5. ಪರೀಕ್ಷೆಗಳು : ಈ ವಿಭಾಗವು ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. ಉದಾಹರಣೆಗೆ - ಒಟ್ಟಾರೆ ಫಲಿತಾಂಶಗಳು, ಶೇಕಡಾವಾರು ಉತ್ತೀರ್ಣ, ಶಾಲೆಯ ಪ್ರಕಾರವಾರು ಫಲಿತಾಂಶ, ಲಿಂಗವಾರು ಫಲಿತಾಂಶ, ಸಾಮಾಜಿಕ ವರ್ಗವಾರು ಫಲಿತಾಂಶ, ಪ್ರದೇಶವಾರು (ನಗರ/ಗ್ರಾಮೀಣ) ಫಲಿತಾಂಶ, ಮಾಧ್ಯಮವಾರು ಫಲಿತಾಂಶ, ಗ್ರೇಡ್‍ವಾರು ಫಲಿತಾಂಶ, ಜಿಲ್ಲಾವಾರು ಫಲಿತಾಂಶ ಹಾಗೂ ಪದವಿಪೂರ್ವ ಶಿಕ್ಷಣ ಮಂಡಳಿಯ ಫಲಿತಾಂಶವನ್ನು ಕಾಲೇಜುವಾರು, ಮಾಧ್ಯಮವಾರು, ಲಿಂಗವಾರು ಮತ್ತು ಸ್ಟ್ರೀಮ್‍ವಾರು ಫಲಿತಾಂಶದ ವಿವರ ಲಭ್ಯವಾಗುತ್ತದೆ.
 6. ಇಲಾಖೆಯ ಆಡಳಿತ : ಈ ವಿಭಾಗದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದ ಜಿಲ್ಲಾವಾರು ಅನುದಾನದ ವಿವರ, ದಾಖಲಾತಿ ವಿವರ ಮತ್ತು ಅಡುಗೆಯವರು(ಸಿ.ಸಿ.ಹೆಚ್)ರವರ ವಿವರಗಳು ಲಭ್ಯವಾಗುತ್ತದೆ.
 7. ಯೋಜನೆ ಮತ್ತು ಆಯವ್ಯಯ : ಇಲಾಖೆಯ ವಿವಿಧ ಯೋಜನೆಗಳು ಮತ್ತು ಆಯವ್ಯಯದಡಿಯಲ್ಲಿ ಮಾಡಲಾದ ಈ ಪ್ರಕಾರದ ಅವಕಾಶಗಳ ವಿವರ ಲಭ್ಯವಿದೆ –ಮುಂದುವರೆದ ಯೋಜನೆಗಳ ವರ್ಷವಾರು ಅನುದಾನದ ವಿವರ, ಅನುದಾನ ಬಿಡುಗಡೆ ಮತ್ತು ಬಳಕೆಯ ಮಾಹಿತಿ, ಹೊಸ ಯೋಜನೆಗಳ ಮಾಹಿತಿ, ನೆರೆ ಪೀಡಿತ ಶಾಲೆಗಳ ಪುನರ್‍ನಿರ್ಮಾಣ, ಈ ಎಲ್ಲಾ ವಿವರಗಳು ಜಿಲ್ಲಾ, ಬ್ಲಾಕ್ ಮತ್ತು ಶಾಲಾ ಹಂತದವರೆಗೆ ಲಭ್ಯವಾಗುತ್ತದೆ.
 8. ಲೋಕ ಶಿಕ್ಷಣ : ಈ ವಿಭಾಗದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದ ಆರ್ಥಿಕ ಅಂಶಗಳು ಮತ್ತು ಸಾಕ್ಷರತಾ ಕಾರ್ಯಕ್ರಮಗಳ ಮಾಹಿತಿ ಲಭ್ಯವಿದೆ; ಯೋಜನಾವಾರು ಅನುದಾನದ ವಿವರ, ಬಿಡುಗಡೆಯಾದ ಅನುದಾನ ಮತ್ತು ವರ್ಷವಾರು ಅನುದಾನದ ಬಳಕೆ ಹಾಗೂ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನದ ವಿವರ.
 9. ಗ್ರಂಥಾಲಯ : ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ವಿವರ ಈ ವಿಭಾಗದಲ್ಲಿ ಲಭ್ಯವಾಗುತ್ತದೆ – ಡಿಜಿಟಲ್ ಲೈಬ್ರರಿ ಅನುಷ್ಠಾನಕ್ಕೆ ಅನುಮೋದಿತ ಅನುದಾನ, ಬಿಡುಗಡೆ ಹಾಗೂ ವೆಚ್ಚ ಹಾಗೂ ಜಿಲ್ಲಾವಾರು ವಿವಿಧ ಗ್ರಂಥಾಲಯಗಳ ಸಂಖ್ಯೆಯ ವಿವರ ಲಭ್ಯವಾಗುತ್ತದೆ.
 10. ವಿಶ್ಲೇಷಣೆ : ಈ ವಿಭಾಗದಲ್ಲಿ ದತ್ತಾಂಶದ ಹೋಲಿಕೆಯನ್ನು ತೋರಿಸುವ ವಿಶ್ಲೇಷಣಾತ್ಮಕ ಪಟ್ಟಿಯನ್ನು ಒದಗಿಸುತ್ತದೆ. ಉದಾಹರಣೆ - ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳ(ಪ್ರಕಾರಗಳು) ಸರಾಸರಿ ಸಂಖ್ಯೆ, ಪ್ರತಿ ಶಾಲೆಗೆ ತರಗತಿ ಕೊಠಡಿಗಳ ಸರಾಸರಿ ಸಂಖ್ಯೆ, ಪ್ರತಿ ಶಾಲೆಗೆ ಉತ್ತಮ ತರಗತಿ ಕೊಠಡಿಗಳ ಸರಾಸರಿ ಸಂಖ್ಯೆ, ಪ್ರತಿ ಶಾಲೆಗೆ ಲಭ್ಯವಿರುವ ಶೌಚಾಲಯಗಳ ಸರಾಸರಿ, ಪ್ರತಿ ಶಾಲೆಗೆ ಬಾಲಕಿಯರ/ಬಾಲಕರ ಸರಾಸರಿ ಇತ್ಯಾದಿ.

About Parivarthana (EM Dashboard)

Hon’ble Education Minister, Shri. Suresh Kumar, envisaged the need to have a dashboard which will provide collaborative view and insight into Government of Karnataka’s Primary and Secondary Education department’s performance and progress. Without this dashboard, in order to get this information, one has to access multiple departmental IT systems, which are used by different divisions of the department. Parivarthana collates relevant information from multiple IT systems presently used in the department and presents it in such a way that the top management of the department can have a glance of the performance and progress of the department as well as drill-down further to view micro-level information.

Key information provided on the Parivarthana includes the following;
 1. Minister’s Directions – Directions issued by the Hon’ble Minister can be entered into the system, sent to the concerned officials of the department for taking necessary actions within a defined timeline and Officials can enter the action taken on the directions issued. Minister’s Office can monitor the progress on the directions issued.
 2. Schools – This component provides details pertaining to the schools such as; School Count, School Infrastructure, School Facilities and School Teachers with drill-down facility to view educational district-level and block-level details.
 3. Students – This component provides details pertaining to the students such as; Students count from Class 1 to Class 10 with break-up of Boys and Girls. Facility to view the information at district-level and taluk-level along with filters like School type, Medium of Instruction and Category is provided.
 4. Teachers (Government & Government Aided schools) – This component provides details pertaining to the teachers such as; Teachers count, Subject-wise teachers count, Teachers Educational qualification, Teachers experience, Teachers training and Shikshaka Mitra with drill-down facility to view educational district-level and block-level details.
 5. Examination – This component provides details pertaining to the SSLC board examination such as; Overall results, Pass percentage, School type-wise results, Gender-wise results, Social category-wise results, Area-wise (Urban / Rural) results, Medium-wise results, Grade-wise results, District-wise pass percentage and Year-wise PU board results with filters like College Management, Medium of Instruction, Gender and Stream.
 6. State Administration – This component provides details pertaining to the Mid-day- Meal such as; District-wise Fund details, Enrolment details and Cook-cum-Helper (CCH) details.
 7. Planning & Budget – This component provides details pertaining to the schemes planned & budgetary provisions such as; On-going Schemes year-wise details of Amount Provisioned, Amount Released and Amount Utilized, New Schemes details and details of Flood Hit School buildings reconstruction with filters like Educational District, Block and School Management.
 8. Mass Education – This component provides details pertaining to the financial aspects of schemes and Literacy programs such as; Details of scheme-wise Amount Provisioned, Amount Released and Amount Utilized year-wise and achievements in implementing the Literacy program schemes.
 9. Library – This component provides details pertaining to the Library information such as; Fund details like Amount Provisioned, Amount Released and Amount Utilized for digitization of libraries and library count across the districts with filter on Library type.
 10. Analytics – This component provides analytical charts which show comparison of data such as; Urban Vs Rural:- Number of Schools (Type-wise), Average Number of Classrooms per school, Average Number of Good Classrooms per school, Average Number of Toilets available per school, Average Number of Teachers posted per school and Average Number of Girls / Boys per school.