ಪಾಶ್ರ್ವನೋಟ

ಶ್ರೀ ಸುರೇಶ್ ಕುಮಾರ್ ರವರು 1975 ನೇ ಇಸವಿಯ ತುರ್ತುಪರಿಸ್ಥಿತಿಯ ಅವಧಿಯಲ್ಲಿ ರಾಜಕೀಯ ಪ್ರವೇಶ ಮಾಡಿದರು. ಶ್ರೀ ಎಲ್.ಕೆ. ಅಡ್ವಾಣಿ, ಶ್ರೀ ಅಟಲ್ ಬಿಹಾರಿ ವಾಜಪೆಯಿ, ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಜಾರ್ಜ್ ಫರ್ನಾಂಡಿಸ್ ಹಾಗೂ ಇತರರೊಂದಿಗೆ 15 ತಿಂಗಳು ಕಾಲ ಸೆರೆಮನೆವಾಸದಲ್ಲಿದ್ದರು. ತದನಂತರ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಅವರ ಜೀವನವೃತ್ತಿಯಿಡಿ ನೇರನಡೆನುಡಿ, ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸರಳತೆ ಹಾಗೂ ದೂರದೃಷ್ಟಿಗಾಗಿ ಹೆಸರಾದವರು. ಕಳೆದ 35 ವರ್ಷಗಳಿಂದ ರಾಜಕಾರಣದಲ್ಲಿರುವ ಅವರು ರಾಜಕೀಯ ಜೀವನವನ್ನು ಜನಸಂಘದ ಸಕ್ರಿಯ ಕಾರ್ಯಕರ್ತನಾಗಿ ಪ್ರಾರಂಭಿಸಿ, ಎರಡು ಬಾರಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ ಹಾಗೂ ಪ್ರಸ್ತುತ ಅವಧಿ ಸೇರಿದಂತೆ 05 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ತತ್ವ ನಿಷ್ಠ ರಾಜಕಾರಣಿಯಾಗಿರುವ ಅವರು ಅದನ್ನು ಅನುಸರಿಸಿಕೊಂಡು ಬಂದಿದ್ದಾರೆ. 1999 ನೇ ಸಾಲಿನಲ್ಲಿ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ಅಂದಿನ ಮುಖ್ಯ ಮಂತ್ರಿ ಜೆ.ಹೆಚ್. ಪಟೇಲ್ ರವರಿಂದ ಮಾದರಿ ಶಾಸಕರೆಂಬ ಮನ್ನಣೆಗೆ ಪಾತ್ರರಾಗಿದ್ದರು. ಅವರಿಗೆ ಪಕ್ಷ ಭೇದವಿಲ್ಲದೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರ ವಲಯವಿದೆ. ಈ ಹಿಂದೆ ರಾಜ್ಯದ ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. 2008 ರಿಂದ 2013 ರವರೆವಿಗೆ ರಾಜ್ಯದ ನಗರಾಭಿವೃದ್ಧಿ, ಕಾನೂನು ಮತ್ತು ಸಂಸಧೀಯ ವ್ಯವಹಾರಗಳ ಮಂತ್ರಿಯಾಗಿದ್ದಾಗ ನಗರಾಭಿವೃದ್ಧಿ ಇಲಾಖೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದಾರೆ. ಹಲವಾರು ನಗರಸಭೆಗಳನ್ನು ನಗರ ಪಾಲಿಕೆ ಗಳನ್ನಾಗಿ ಮೇಲ್ದರ್ಜೆಗೇರಿಸಲು ಕಾರಣೀಭೂತರಾಗಿರುತ್ತಾರೆ. ಅವರ ಅವಧಿಯಲ್ಲಿ ಮೊದಲ ಬಾರಿಗೆ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇತರೆ ಹಲವಾರು ಕ್ರಮಗಳೊಂದಿಗೆ ಕಾನೂನು ಆಯೋಗವನ್ನು ಸಹ ಸ್ಥಾಪಿಸಲಾಯಿತು. ಅವರ ಈ ಸೇವಾವಧಿಯಲ್ಲಿ “ಸಕಾಲ ಮಿಶನ್” ಎಂಬ ಪ್ರಜಾಸ್ನೇಹಿ ಸೇವೆಯನ್ನು ಪ್ರಾರಂಭಿಸಲಾಯಿತು. ಈ ಸೇವೆಯಡಿಯಲ್ಲಿ ಕರ್ನಾಟಕದ ಹಲವಾರು ಇಲಾಖೆಗಳಲ್ಲಿ ನಿಗದಿತ ಅವಧಿಯಲ್ಲಿ ನಾಗರೀಕರಿಗೆ ಸೇವೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಯಿತು. ಪ್ರಸ್ತುತ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದು, ಇಲಾಖೆಯ ಅಡಳಿತದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣರಾಗಿ, ಇಲಾಖೆಯನ್ನು ಒಂದು ಚೌಕಟ್ಟಿಗೆ ತರುವ ಹೆಗ್ಗಳಿಕೆ ಅವರದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ಪ್ರಮುಖ ಕ್ರಮಗಳು ಈ ಕೆಳಕಂಡಂತೆ ಇರುತ್ತವೆ.

ಶಿಕ್ಷಣ :

 1. ಹಲವಾರು ವರ್ಷಗಳ ನಂತರ 1100 ಪದವಿ ಪೂರ್ವ ಶಿಕ್ಷಣ ಕಾಲೇಜುಗಳ ಉಪನ್ಯಾಸಕರ ನೇಮಕಾತಿ.
 2. ಶಿಕ್ಷಣ ಸ್ನೇಹಿ ವರ್ಗಾವಣೆ ಕಾನೂನು
 3. ಕಾರ್ಮಿಕರು ಹಾಗೂ ವಲಸೆಗಾರರ ಮಕ್ಕಳಿಗೆ ಆರ್.ಟಿ.ಇ. ಸೌಲಭ್ಯವನ್ನು ವಿಸ್ತರಣೆ ನೀತಿ ಜಾರಿ.
 4. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ರಾಜ್ಯದ ಶಿಕ್ಷಣ ನೀತಿಯನ್ನು ರೂಪಣೆ.
 5. ತಂತ್ರಜ್ಞಾನದ ಸಹಾಯದಿಂದ ಶಿಕ್ಷಕ ಹಾಗೂ ವಿದ್ಯಾರ್ಥಿ ಸ್ನೇಹಿ ಆಡಳಿತವನ್ನು ಜಾರಿ.
 6. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾರ್ಯಯೋಜನೆ ಜಾರಿ..
 7. ಕರೋನಾ ವಿಷಮ ಸನ್ನಿವೇಶದಲ್ಲಿ ಸುರಕ್ಷಿತ ವಾತಾವರಣದಲ್ಲಿ 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಿದ ಹೆಗ್ಗಳಿಕೆ.
 8. ಕೋವಿಡ್-19 ರ ಮಹಾಮಾರಿಯ ಅವಧಿಯಲ್ಲಿ ವಿಶಿಷ್ಟ ರೀತಿಯ ಬೋಧನಾ ಹಾಗೂ ಕಲಿಕಾ ಸಾಧನವಾದ “ವಿದ್ಯಾಗಮ” ಎಂಬ ಬೋಧನಾ ಕ್ರಮವನ್ನು ಜಾರಿ..
 9. 6 ರಿಂದ 8 ನೇ ತರಗತಿಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ಚಾಲನೆ.

ಸಕಾಲ :

 1. 97 ಇಲಾಖೆ / ಸಂಸ್ಥೆಗಳಲ್ಲಿ 1029 ಕ್ಕು ಹೆಚ್ಚು ಸೇವೆಗಳನ್ನು ಸಕಾಲ ಮಿಷನ್ ಅಡಿ ಸೇರ್ಪಡೆ ಮಾಡಲಾಯಿತು.
 2. ನಾಗರೀಕರ ಮನೆ ಬಾಗಲಿಗೆ ಸೇವೆಯನ್ನು ನೀಡುವ ‘ಜನಸೇವಕ’ ಯೋಜನೆಯನ್ನು ಸಕಾಲ ಸೇವಾಸಿಂಧು ಅಡಿಯಲ್ಲಿ ಪ್ರಾರಂಭ.
 3. ಇಲಾಖೆಯಲ್ಲಿ ತಂತ್ರಜ್ಞಾನಾಧಾರಿತ ಹಾಗೂ ಉನ್ನತ ಮಟ್ಟದ ಆಡಳಿತವನ್ನು ಜಾರಿ.
 4. ಇದೇ ಅವಧಿಯಲ್ಲಿ ಕೆಲ ತಿಂಗಳು ಕಾರ್ಮಿಕ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದು, ಅವರ ಅವಧಿಯಲ್ಲಿ ಕೈಗೊಂಡ ಕ್ರಮಗಳು :
 5. ಮಹಿಳಾ ಕಾರ್ಮಿಕರು ಸಮಾನಾಂತರ ಸೌಲಭ್ಯದ ಅಡಿಯಲ್ಲಿ 24 ಘಿ 7 ಕರ್ತವ್ಯ ನಿರ್ವಹಿಸುವಂತೆ ಕ್ರಮ.
 6. ಖಾಸಗಿ ಸಂಸ್ಥೆಗಳಲ್ಲಿ ನೇಮಕಾತಿಗಾಗಿ ಸ್ಥಳೀಯ ಕನ್ನಡಿಗರಿಗೆ ಪ್ರಥಮ ಅವಕಾಶ.
 7. ಅಸಂಘಟಿತ ವಲಯದ ಕಾರ್ಮಿಕರಿಗೆ 24 ಘಿ 7 ಸಹಾಯವಾಣಿ ಜಾರಿ.
 8. ಸ್ವಿಗಿ, ಝೊಮ್ಯಾಟೋ ಹಾಗೂ ಇತರೆ ಸಮಾನಾಂತರದ ಗಿಗ್ ಆರ್ಥಿಕವಲಯದ ನೌಕರರುಗಳನ್ನು ಸದ್ಯದಲ್ಲಿಯೇ ಕಾರ್ಮಿಕ ಕಾನೂನಿನ ವ್ಯಾಪ್ತಿಗೆ ಕ್ರಮ.

PROFILE:

Mr Suresh Kumar initiated himself into politics during the emergency period in 1975. He was imprisoned for a period of 15 months alongside great leaders like Sri. LK Advani ji, Sri. AB Vajpayee ji, Sri.Ramakrishna Hegde, Sri.George Fernandes, and others. Later he started his career as an advocate. Right through his career, he is known for his honesty, vision, simplicity and straightforwardness. He’s been in active politics for over 35 years. He has rose from the grass root level, initially being as an active worker of Janasangh, went on to become Bangalore City Corporator twice and five times as Legislative Member of Karnataka Assembly including current term. He set himself to be as a Value based politician, and followed the same throughout his career. During 1999 he donned the role of deputy leader of Assembly... And was recognized by the then Chief Minister JH Patel as the Model Legislator. It is all the more imperative; he has friends, cutting across all party lines. Previously he served as the Minister for Urban development, law and Parliamentary Affairs in Karnataka Government. From 2008 to 2013 he served as Minister for Urban Development, Law and Parliamentary Affairs, Government of Karnataka. In his tenure as the Minister he brought about lot of reforms in the areas of urban development. He was responsible in upgrading many municipalities as City Corporation. Law University was set up for the first time, Law commission was constituted apart from many others. During this period a new system of Citizen Friendly Initiative was brought in the State of Karnataka, called as “SAKALA MISSION”. Under this mission, service guarantee has been provided to citizens in the State of Karnataka within the stipulated time frame, as defined to each service linked under this mission. Presently he holds the Ministry of Primary and Secondary Education and Sakala . It is needless to say that he is one of the top performing Ministers, who is bringing radical changes in the administration of these Departments. Few of his initiatives are highlighted here under.

EDUCATION

 1. 1100 Pre-University College Lecturers have been recruited after many years.
 2. Brought out a completely revamped, teacher friendly transfer act.
 3. Brought out a special policy of extending provisions of RTE to the children of Labourers and migrants
 4. Initiated formulation of Education Policy for Karnataka on the lines of National Education Policy.
 5. Introduced many technological initiatives for teacher and student friendly Governance.
 6. Has kept in place a strong action plan for quality education in Government Schools.
 7. Conducted SSLC Examination successfully for the year 2019-20 during critical Covid-19 pandemic period ensuring safety of nearly 8.5 Lakh children
 8. Launched a unique way of teaching and learning concept called “Vidyagama” for the help of the Children, during Covid-19 pandemic period.
 9. Initiated recruitment of Ten Thousand Teachers for Classes 6-8.

SAKALA

 1. Over 1029 Services in 97 Departments / Institutions are covered under Sakala now.
 2. Has initiated ‘Jana Sevaka’ service to the doorsteps of Citizens under Sakala – Sevasindhu.
 3. Responsible for many IT driven initiatives and best practices in the Ministry.
 4. For a brief period he served as Labour minister under the leadership of Hon’ble Chief Minister, Sri Yediyurappa, his initiatives during his period is highlighted hereunder

LABOUR

 1. Many important legislations have come into force.
 2. As an equal opportunity initiative, woman employees now can work 24 x 7. Notification in this regard has been issued to this effect.
 3. Local Kannadigas get priority in recruitments in Private Organizations.
 4. He is instrumental in introducing 24 x 7 helpline for unorganized sector employees.
 5. Employees of gig economy viz.,Swiggy,Zomato and others will shortly be covered under Labour Laws
EM-Dashboard4-pg